ಬುಧವಾರ, ಜೂನ್ 2, 2010

ನನ್ನ ಊರು ಸಿರ್ಸಿ ನೆನಪಾಗ್ತಾ ಇದೆ!

ಮಲೆನಾಡು ಬೀಡು ಎಂಥ ಚೆಂದ! ಸುಮಧುರ ಕಂಪು ಸವಿ ನೆನಪು! ಇನ್ನು ಏನೇನೋ ಹೇಳ್ಬೇಕು ಅಂತ ಆಶೆ! :) ಆದರೆ ಇದುಬ್ಲಾಗ್ ಆಗಲ್ಲ ಕವಿತೆ ಆಗಿಬಿಡುತ್ತೆ! ಇರಲಿ ಬಿಡಿ ಮುಂದೆ ಓದಿ!

ನಾನು ಕಲಿತಿರೋದು ಒಂದು ಸರ್ಕಾರೀ ಶಾಲೆ, ಅದರ ಹೆಸರು ಮೂರನೆ ನಂಬರ್ ಶಾಲೆ, ಆದರ್ಥ ನಾವು ಯಾವಾಗಲು ಮೂರನೆನಂಬರ್ ಅಂತ ಏನು ಇಲ್ಲ! ಶಾಲೆ ಸಕತ್ತಾಗಿತ್ತು. ನಾವೆಲ್ಲ ಚಿಕ್ಕ ಚಿಕ್ಕ ಹಲಗೆಗಳ ಮೇಲೆ ಕೂತುಕೊಂಡು ನಮ್ಮ ಸರ್ ಗಳುಹೇಳೋದನ್ನ ತುಂಬಾನೇ ಗಮನ ಕೊಟ್ಟು ಕೇಳ್ತಾ ಇದ್ವಿ. ಅವಾಗ ಕಣ್ಣಲ್ಲಿ ಏನೇನೋ ಕನಸುಗಳು, ಇ ಶಾಲೆಯಿಂದ ಹೋಗಿ ನಾವುಮುಂದೆ ಏನಾಗಬೇಕು ಅಂತ ಯೋಚನೆ ಮಾಡುವಸ್ಟು ಬುದ್ದಿವಂತಿಕೆ!. ಪಕ್ಕದಲ್ಲೇ ಒಂದು ದೊಡ್ಡ ಮನೆಯಿತ್ತು, ಅದು ಆಗಿನ ಒಬ್ಬ ಎಂಪಿ ಮನೆಯಂತೆ, ನನಗೆ ನೆನಪಿರೋ ಹಗೆ ಅದೊಂದು ಮನ್ಯೇಅಲ್ಲಿ ಮಾತ್ರ ಕಾರು ನೋಡಿದ್ವಿ

ರಜೆ
ಬಂತು ಅಂದ್ರೆ ಅಲ್ಲೇ ಪಕ್ಕದಲ್ಲಿರೋ ಸಹಸ್ರಲಿಂಗಕ್ಕೆ ಓಡೋದು, ಅಲ್ಲಿ ಜುಳು ಜುಳು ಹರಿಯೋ ಶುಭ್ರ ನಿರನ್ನ ನೋಡ್ತಾ ಹಸಿರು ಪರಿಸರ ನೋಡ್ತಾ ಸಂಜೆ ತನಕ ಕಲ ಕಳೆಯೋದು, ಲೇಟಾಗಿ ಬಂದು ಮನ್ಯೇಅಲ್ಲಿ ಅಮ್ಮನ ಹತ್ತಿರ ಬಯಿಸಿಕೊಳ್ಳೋದು, ಅದು ಒಂಥರಾ ತ್ರಿಲ್ಲೇ! :). ನನಗೆ ಅವಾಗಲೇ ಕವಿತೆಗಳನ್ನ ಬರೆಯೋ ಹುಚ್ಚು ಬೇರೆ! ನನ್ನ ಮೊದಲ್ನೇ ಕವಿತೆ "ಸಿರ್ಸಿ ಸಮಾಚಾರ" ಅನ್ನೋ ಪೇಪರ್ನಲ್ಲಿ ಬಂದಾಗ ಆಗಿರೋ ಕುಶಿ ಅಂತು ವಿವರಿಸಿ ಹೇಳೋಕೆ ಸಾಧ್ಯ ಇಲ್ಲ, ಏನೋ ಒಂಥರಾ ಅಕಾಡೆಮಿ ಅವಾರ್ಡ್ಬಂಥರ ಖುಷಿ.

ಬೇಕಾದರೆ ಇಡಿ ಚರಿತ್ರೆನೆ ಬರಿಬೋದು ಹಿಂಗೆ ನಿಮ್ಮಗಳ ತಲೆ ತಿನ್ತ ಇದ್ರೆ! ಹೆದರಬೇಡಿ, ಜಾಸ್ತಿ ಏನು ತಿನ್ನಲ್ಲ! :) ಸ್ವಲ್ಪ ತಿನ್ಥಿನಿ!
ನಮ್ಮೂರು ಅಂದ್ರೆ ನಿಜವಾಗ್ಲೂ ಒಂಥರಾ ಚಂದನೆ, ಅಲ್ಲಿ ೨೩ಕ್ಕೂ ಜಾಸ್ತಿ ಜಲಪಾತಗಲಿದ್ದವೆ!, ಇಷ್ಟು ಬೆಳೆದ ಮೇಲು ಕ್ಕಿಂತ ಜಾಸ್ತಿಜಲಪಾತ ನೋಡೋಕೆ ಆಗಿಲ್ಲ, ಹಣೆಬರಹ! ಇರಲಿ ಬಿಡಿ! ಸುಮ್ಮನೆ ಗೋಳು ಹೊಯ್ಕೊಲ್ಲೋಕೆ ಇಷ್ಟ ಇಲ್ಲ!

ಯಾಣ ಅಂತು "ನಮ್ಮೂರ ಮಂದಾರ ಹೊವೇ" ಸಿನಿಮಾ ಬಂದ ಮೇಲೆ ತುಂಬಾ ಫೇಮಸ್ ಆಗಿ ಬಿಡ್ತು. ನಿಜವಾಗ್ಲೂ ಗೊವೆರ್ನಮೆಂಟ್ ಬಸ್ಸಲ್ಲಿ ಹೋಗೋದು, ಬಸ್ ಸ್ಟ್ಯಾಂಡ್ ಅಲ್ಲಿ ಪಾನಿಪುರಿ ತಿನ್ನೋದು, ನಟರಾಜ ದಲ್ಲಿ ಸಿನಿಮಾ ನೋಡೋದು, ರಾಘವೇಂದ್ರ ಮಠಕ್ಕೆ

ಹೋಗೋದು, ಅಲ್ಲಿರೋ ಪ್ರಶಾಂತ ವಾತವರಣ ಸವಿಯೋದು!, "ಜೂನಲ್ಲಿ" ಇನ್ನೂ ಸಿಕ್ಕು ಹಾಕ್ಕೊಂಡಿರೋ ಪ್ರಾಣಿಗಳನ್ನೆಲ್ಲಾ ನೋಡೋದು, ಒಂದ ಎರಡ! ಕಥೆ ಪುರಾಣ! ಏನ್ ಕೆಳ್ಥಿರ!.

ಮಜಾ ಇ ಬೆಂಗಳೂರಲ್ಲಿ ಎಲ್ಲೂ ಸಿಗೋಲ್ಲ!, ಅದೆನಕ್ಕೆ ಇ ಜಗತ್ತಿನ ಯಾವಮೂಲೆಯಲ್ಲೂ ಸಿಗಲ್ಲ, ಅಸ್ಟು ಗ್ಯಾರಂಟೀಯಾಗಿ ಹೆಂಗೆ ಹೇಳ್ತಾ ಇದ್ದೀನಿ ಅಂದ್ರೆ ನನ್ನ ಜಗತ್ ಪ್ರಯಾಣದ ಅನುಭವದಿಂದ!

ಸಿರ್ಸಿ ನನ್ನೂರು, ತುಂಬ ಚೆಂದದ ಊರು, ತುಂಬಾ ಒಳ್ಳೆ ಜನ, ಪ್ರಶಾಂತ ಜನ, ಮುದ್ದಾದ ಮಕ್ಕಳು, ಸೊಗಡಿನ ಸ್ಮೆಲ್ಲು ಇನ್ನುನನ್ನನ್ನ ಕಾಡ್ತಾ ಇದೆ!. ಇನ್ನು ಏನೇನೋ ಬರೀಬೇಕು, ಆದ್ರೆ ಆಫೀಸ್ ಕೆಲಸ ಇದೆ, ಆಮೇಲೆ ಸಿಗೋಣ! ಹಂಗಾದ್ರೆ ಹೋಪುದಮಾರಾಯರೇ! ಮತ್ತೆ ಸಿಗುವ!